Friday, 11 October 2013

ತಾಳುವಿಕೆಗಿಂತನ್ಯ ತಪವು ಇಲ್ಲ

ತಾಳುವಿಕೆಗಿಂತನ್ಯ ತಪವು ಇಲ್ಲ

- ಶ್ರೀ ವಾದಿರಾಜರ ಕೃತಿ

ತಾಳುವಿಕೆಗಿಂತನ್ಯ ತಪವು ಇಲ್ಲ
ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ

ದುಷ್ಟಜನರು ನುಡಿವ ನಿಷ್ಟುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೇ ತಾಳು
ನೆಟ್ಟ ಸಸಿ ಫಲ ತರುವತನಕ  ಶಾಂತಿಯ ತಾಳು
ಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು

ತಾಳುವಿಕೆಗಿಂತನ್ಯ ತಪವು ಇಲ್ಲ
ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ

ಹಳಿದು ರಂಜಿಸುವಂತ ಹಗೆಯ ಮಾತನೆ ತಾಳು
ಸುಳಿನುಡಿ ಕುಹಕಾದಿ ಮಂತ್ರವನು ತಾಳು
ಅಳುಕದೆಲೆ ಅರಸು ಬಿಂಕದ ನುಡಿಯ ನೀ ತಾಳು
ಹಲಜರಾನುಜರನ್ನು ಹೃದಯದಲಿ ತಾಳು

ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು 
ಉಕ್ಕೋ ಹಾಲಿಗೆ ನೀರನಿಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು

Sunday, 29 September 2013

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ 

ರಚನೆ : ಪುರಂದರದಾಸರು


ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೋ ಮನದೀಷ್ಟವೀಯೋ

ಕುಂದಣದ ಆಶ್ರಯವು ನವರತ್ನಗಳಿಗೆಲ್ಲ
ಚಂದಿರನ ಆಶ್ರಯವು ಚಕೋರಗಳಿಗೆ
ಕಂದರ್ಪನಾಶ್ರಯವು ವಸಂತ ಕಾಲಕ್ಕೆ
ಗೋವಿಂದನಾಶ್ರಯವು ಮರಣಕಾಲದೊಳು

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೋ ಮನದೀಷ್ಟವೀಯೋ

ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯ ನದಿಗಳು ರಿಶಿಗಳಾಶ್ರಯವು
ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವು
ತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೋ ಮನದೀಷ್ಟವೀಯೋ

ಪತಿವ್ರತಾ ವನಿತೆಗೆ ಪತಿಯೊಂದೆ ಅಶ್ರಯವು
ಯತಿಗಳಿಗೆ ಪರಮ ಶೃತಿ  ಪ್ರಣವದಾಶ್ರಯವು 
ಮತಿವಂತನಿಗೆ ಹರಿಯ ಸ್ತುತಿಗಳೇ ಆಶ್ರಯವು
ಹಿತವಾದ ಪುರಂದರ ವಿಠಲನಾಶ್ರಯವು

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೋ ಮನದೀಷ್ಟವೀಯೋ

Saturday, 21 September 2013

ಕರುಣಾಳು ಬಾ ಬೆಳಕೇ


ಕರುಣಾಳು ಬಾ ಬೆಳಕೇ

ಸಾಹಿತಿ : ಬಿ.ಎಂ. ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲು ದೂರ ನೋಟವನು
ಕೇಳಿನೊಡನೆಯೇ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು 

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈಹಿಡಿದು ನಡೆಸದಿಹೆಯ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯ
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತಾ

ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು

ಯೂಟ್ಯೂಬ್ ಲಿಂಕ್:
  1.  B.R.ಛಾಯಾ http://www.youtube.com/watch?v=1Vk1lmV7uvc 
  2. ರತ್ನಮಾಲಾ ಪ್ರಕಾಶ್ http://www.youtube.com/watch?v=q9AAy4zLPuk 
  3. M.D. ಪಲ್ಲವಿ http://www.youtube.com/watch?v=2Ao6a9ZQVvE    


Lead kindly light:

- John Henry Newman

"Lead, Kindly Light, amidst th'encircling gloom,
Lead Thou me on!
The night is dark, and I am far from home,
Lead Thou me on!
Keep Thou my feet; I do not ask to see
The distant scene; one step enough for me.
I was not ever thus, nor prayed that Thou
Shouldst lead me on;
I loved to choose and see my path; but now
Lead Thou me on!
I loved the garish day, and, spite of fears,
Pride ruled my will. Remember not past years!
So long Thy power hath blest me, sure it still
Will lead me on.
O'er moor and fen, o'er crag and torrent, till
The night is gone,
And with the morn those angel faces smile,
Which I have loved long since, and lost awhile!
Meantime, along the narrow rugged path,
Thyself hast trod,
Lead, Saviour, lead me home in childlike faith,
Home to my God.
To rest forever after earthly strife
In the calm light of everlasting life."


Monday, 2 September 2013

ದಾಸನಾಗು ವಿಶೇಷನಾಗು

ದಾಸನಾಗು ವಿಶೇಷನಾಗು

ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ
ಜೀವರಾಶಿಯನ್ನು ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ ತಾನಲ್ಲ ತನ್ನದಲ್ಲ
ಆಸೆ ಥರವಲ್ಲ ಮುಂದೆ ಬಹುದಲ್ಲ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ಆಶ-ಕ್ಲೇಶ- ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು
ಕಾಶಿವಾರಣಾಸಿ ಕಂಚಿ ಕಾಣ- ಹಸ್ತಿ ರಾಮೇಶ್ವರ
ಏಸು ದೇಸ  ತಿರುಗಿದರೆ ಬಹುದೇನೋ ಅಲ್ಲಿ ಹೋದೇನೋ

ದೋಷ ನಾಶಿ ಕೃಷ್ಣೆ ಗಂಗೆ ಗೋದಾವರಿ ಭವನಾಶಿ
ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಏಸು ಬರಿ ಮಾಡಿದರು ಫಲವೇನು? ಈ ಛಲವೇನು?
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿಯಾರು ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ

ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ
ಸುರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ
ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮ್ರಿತವನುಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

 

Saturday, 31 August 2013

Reducig the size of a PDF file

A variety of techniques listed in the following page: 
http://www.wikihow.com/Reduce-PDF-File-Size

I hav used the smallpdf.com  and it does the job within a second!
[Original size of my file was 224KB and it got reduced to 77.5KB]

Tuesday, 20 August 2013

Filing RTO online


Central Government is launching its website - www.rtionline.gov.in - for enabling Indian citizens to file RTO applications online. There is a fee of 10Rs. for filing application and this fee can be paid using online banking or credit/debit cards. More information can be obtained by calling 011-24622461.

Source : Udayavani Newspaper, Manipal Edition dated 20th August 2013. 


ಆರ್.ಟಿ.ಒ. ಅರ್ಜಿಯನ್ನು  ಆನ್ಲೈನ್ ಸಲ್ಲಿಸಲು ಜನರಿಗೆ ಅನುಕೂಲವಾಗುವಂತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು  ವೆಬ್ಸೈಟ್ - www.rtionline.gov.in - ಅನ್ನು ಇಂದಿನಿಂದ ಆರಂಭಿಸುತ್ತಿದೆ. ನಾಗರಿಕರು ಆನ್ಲೈನ್ ಅರ್ಜಿ ಸಲ್ಲಿಸಲು ೧೦ರೂ. ಶುಲ್ಕವನ್ನು ಪಾವತಿಸಬೇಕಾಗಿದೆ ಹಾಗೂ ಈ ಶುಲ್ಕವನ್ನು ಎಸ್.ಬಿ.ಐ. ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಮುಖಾಂತರ ಅಥವಾ ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಸಿ ಪಾವತಿಸಬಹುದು. 

ಮೂಲ : ಉದಯವಾಣಿ ದಿನಪತ್ರಿಕೆ - ಮಣಿಪಾಲ - ದಿನಾಂಕ: ೨೦ - ೦೮ - ೨೦೧೩.    

Jaya Janardhana

ಜಯ ಜನಾರ್ದನ                       



















ಜಯ ಜನಾರ್ದನ ಕೃಷ್ಣ ರಾಧಿಕಾಪತೇ 
ಜರವಿಮೋಚನ ಕೃಷ್ಣ ಜನ್ಮ ಮೋಚನ
ಗರುಡವಾಹನ ಕೃಷ್ಣ ಗೋಪಿಕಾಪತೇ 
ನಯನ ಮೋಹನ ಕೃಷ್ಣ ನೀರಜೇಕ್ಷಣ 

ಸುಜನ ಬಾಂಧವ ಕೃಷ್ಣ ಸುಂದರಾಕೃತೇ 
ಮದನ ಕೋಮಲ ಕೃಷ್ಣ ಮಾಧವ ಹರೇ 
ವಸುಮತೀಪತಿ ಕೃಷ್ಣ ವಾಸವಾನುಜ 
ವರಗುಣಾಕರ ಕೃಷ್ಣ ವೈಷ್ಣವಾಕೃತೀ 

ಸುರುಚಿರಾನನ ಕೃಷ್ಣ ಶೌರ್ಯವಾರಿಧಿ 
ಮುರಹರಾ ವಿಭು ಕೃಷ್ಣ ಮುಕ್ತಿದಾಯಕ 
ವಿಮಲಬಾಲಕ ಕೃಷ್ಣ ವಲ್ಲಭೀಪತೇ 
ಕಮಲಲೋಚನ ಕೃಷ್ಣ ಕಾಮ್ಯದಾಯಕ 

ವಿಮಲಗಾತ್ರನೆ ಕೃಷ್ಣ ಭಕ್ತವತ್ಸಲ 
ಚರಣಪಲ್ಲವಂ ಕೃಷ್ಣ ಕರುಣಕೋಮಲಂ 
ಕುಬಲಯೇಕ್ಷಣ ಕೃಷ್ಣ ಕೋಮಲಾಕೃತೇ 
ತವ ಪದಾಂಬುಜಂ ಕೃಷ್ಣ ಶರಣಮಾಶ್ರಯೇ 

ಭುವನನಾಯಕ ಕೃಷ್ಣ ಪಾವನಾಕೃತೇ 
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ 
ಪ್ರಣಯವಾರಿಧೇ ಕೃಷ್ಣ ಗುಣಗಣಾಕರ 
ರಾಮಸೋದರ ಕೃಷ್ಣ ದೀನವತ್ಸಲ 

ಕಾಮಸುಂದರ ಕೃಷ್ಣ ಪಾಹಿ ಸರ್ವದಾ 
ನರಕನಾಶನ ಕೃಷ್ಣ ನರಸಹಾಯಕ
ದೇವಕೀಸುತ ಕೃಷ್ಣ ಕಾರುಣ್ಯಾಂಬುಧೇ 
ಕಂಸನಾಶನ ಕೃಷ್ಣ ದ್ವಾರಕಾಸ್ಥಿತಾ 

ಪಾವನಾತ್ಮಕಾ ಕೃಷ್ಣ ದೇಹಿ ಮಂಗಳಂ 
ಪದ್ಮದಾಂಬುಜಂ ಕೃಷ್ಣ ಶ್ಯಾಮಕೋಮಲಂ
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ 
ಪಾಲಿಸೆನ್ನನು ಕೃಷ್ಣ ಶ್ರೀಹರಿ ನಮೋ 

ಭಕ್ತದಾಸನ ಕೃಷ್ಣ ಹರಸು ನೀ ಸದಾ 
ಕಾದು ನಿಂತೆ ನಾ ಕೃಷ್ಣ ಸಲಹೆಯಾ ವಿಭೋ 
ಗರುಡವಾಹನ ಕೃಷ್ಣ ಭೂಮಿಕಾಪತೇ 
ನಯನಮೋಹನ ಕೃಷ್ಣ ನೀರಜೇಕ್ಷಣ 


ಯೂಟ್ಯೂಬ್ ಲಿಂಕ್ :