Wednesday, 13 November 2013

ನಂಬಿದೆ ನಿನ್ನ ನಾಗಾಭರಣ

ನಂಬಿದೆ ನಿನ್ನ ನಾಗಾಭರಣ 



















ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ 
ನಿನ್ನೀ ನಾಮವು ಒಂದೇ ನೀಗಿಸಬಲ್ಲದು ಬಾಧೆ 
ತನುಮನ ಜೀವನ ಪಾವನವಯ್ಯ ಶಂಭೋ ಎನ್ನಲು ಇಲ್ಲ ಭಯ 

ಬಾಡದ ಹೂವಿನ ಮಾಲೆ ಬಾಗಿತು ಪಾದದ ಮೇಲೆ
ಪ್ರೇಮಮಯ ನಿನಗೆ ಜಯ 
ನನ್ನ ಜೀವನ ನಿನ್ನಲಿ ತನ್ಮಯ ಭಾಗ್ಯದ ಹಾದಿಯ ಬೆಳಗಯ್ಯ 

ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ 

ಲೋಕವ ಕಾಯುವ ಸ್ವಾಮಿ ಭಿಕ್ಷೆಯ ಬೇಡಿದ ಪ್ರೇಮಿ 
ಭಸ್ಮಮಯ ಬಿಲ್ವಪ್ರಿಯ 
ನನ್ನೀ ದೇಹವೇ ನಿನ್ನಯ ಆಲಯ ಸೇವಾ ಭಾಗ್ಯವ ನೀಡಯ್ಯ 

ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ 

Youtube Link:



Thursday, 7 November 2013

ಮುಕ್ತ

ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ 
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ 
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ 

ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೇ ಜೀವ,
ದಾಟಿ ಈ ಪ್ರವಾಹ
ತಾನು ಬೆಂದು ತಿಳಿ ಬೆಳಕ ಬೀರುತಿದೆ ಒಂದುಇರುಳ ದೀಪ,
ನಿಶ್ಚಯದ ಮೂರ್ತರೂಪ 

ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ,
ಎಲ್ಲುಂಟು ಆಚೆ ತೀರ 
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ,
ಎಲ್ಲುಂಟು ಆಚೆ ತೀರ 

ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ 
ಮರದ ಹಕ್ಕಿಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ 
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ 
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ 


youtube link:

Saturday, 2 November 2013

Anaavarana

ಅನಾವರಣ 

 

ಕತ್ತಲ ಕರಿತೆರೆ ಬೆಳಕಿನ ಕರದಲಿ 
ನೇಸರ ಸರಿಸಿರೆ ಪ್ರಕೃತಿ ಅನಾವರಣ 
ಮೊಗ್ಗು ತಾನಾಗಿಯೇ ತುಟಿದಳ ತೆರೆದರೆ 
ಘಲ್ಲನೆ ನಕ್ಕರೆ ಎಲ್ಲೆಡೆ ಗಂಧದನಾವರಣ 

ಕಬ್ಬಿನ ಸಿಹಿರಸ ಕಮರಿ ಕಾಕಂಬಿ 
ಜೊಳ್ಳು ತೆನೆ ನಿರ್ಬೀಜ ಹಣ್ಣು 
ಚಿನ್ನಕೆ ಅನ್ನ ಹಣಕ್ಕೆ ಬದುಕು 
ಮಿದುಳಿಗೆ ಹೃದಯದ ಹುದ್ದೆ 
ಇದು ಮೌಡ್ಯದನಾವರಣ

ನಗರದ ಜಗಮಗ ಕೃತಕ ಬೆಳಕಲ್ಲಿಯೇ 
ಸೋಗಿನ ನಗೆ ಹುನ್ನಾರದ ಬಗೆ ಬಗೆ 
ವಿಕೃತಿ ಅನಾವರಣ

Title song of S.N. Sethuram's serial "Anaavarana"

youtube link: